ಶ್ರೀ ಶಿವಕುಮಾರ ಪ್ರಶಸ್ತಿ ಪುರಸ್ಕೃತ : ಶ್ರೀ ಸಿ. ಬಸವಲಿಂಗಯ್ಯ :

೧೯೯೭ ರಲ್ಲಿ ಶಿವಸಂಚಾರದ ಪ್ರಾರಂಭದ ನಂತರ ಹೊಸ ಹೊಸ ನಿರ್ದೇಶಕರ ಹುಡುಕಾಟ ನಡೆದಿತ್ತು. ಮೊದಲ ವರ್ಷ ಸಿಜಿಕೆ, ಅಶೋಕ ಬಾದರದಿನ್ನಿ ಮತ್ತು ವೈ ಡಿ ಬದಾ" ಕ್ರಮವಾಗಿ 'ಶೋಕಚಕ್ರ, ಮಹಾಬೆಳಗು, ಉರಿಲಿಂಗ ಪೆದ್ದಿ' ನಾಟಕ ನಿರ್ದೇಶನ ಮಾಡಿದ್ದರು. ಈ ಮೂರು ನಾಟಕಗಳು ಶಿವಸಂಚಾರದ ಆರಂಭವನ್ನು ಎಲ್ಲರೂ ಮೆಚ್ಚುವಂತೆ ಮಾಡಿದ್ದವು. ಎರಡನೆಯ ವರ್ಷ ಹೊಸ ನಿರ್ದೇಶಕರನ್ನು ಬರಮಾಡಿಕೊಳ್ಳಬೇಕು ಎನ್ನುವ ಅಭಿಪ್ರಾಯ ಸಿಜಿಕೆ ಅವರದು. ರಂಗಾಯಣದ ನಿರ್ದೇಶಕ ಬಸವಲಿಂಗಯ್ಯನವರನ್ನು ಕೇಳೋಣ ಎಂದರು ಸಿಜಿಕೆ. ನಮಗೆ ಅವರ ಪರಿಚಯ ಇಲ್ಲ ಎಂದಾಗ ತಾವೇ ಮಾತನಾಡುವುದಾಗಿ ಹೇಳಿದರು. ಬಸವಲಿಂಗಯ್ಯನವರ ಎಡಪಂಥೀಯರಾಗಿದ್ದು ಮಠ, ಸ್ವಾ"ಗಳು ಎಂದರೆ ಮೂಗುಮುರಿಯುವ ಸ್ಥಿತಿಯಲ್ಲಿದ್ದವರು. ಹಾಗಾಗಿ ಸಾಣೇಹಳ್ಳಿ ಮಠಕ್ಕೆ ಬರುವುದಿಲ್ಲ; ಅಲ್ಲಿಗೆ ಹೋದಮೇಲೆ ಸ್ವಾ"ಗಳಿಗೆ ನಮಸ್ಕಾರ ಮಾಡಲು ಆಗುವುದಿಲ್ಲ. ಆದ್ದರಿಂದ ನನ್ನನ್ನು ಸಂಕಟಕ್ಕೆ ಸಿಲುಕಿಸುವುದು ಬೇಡ ಎಂದರಂತೆ. ಅದಕ್ಕೆ 'ಸಿಜಿಕೆ'ಯವರು ನನ್ನಂಥವನೇ ಮಠಕ್ಕೆ ಹೋಗಿಲ್ಲವೇ? ಅಲ್ಲಿ ನೀನು ಸ್ವಾ"ಗಳಿಗೆ ನಮಸ್ಕಾರ ಮಾಡಬೇಕಾಗಿಲ್ಲ. ನಮಸ್ಕಾರ ಮಾಡಬೇಕೆಂದು ಅವರು ಬಯಸುವುದಿಲ್ಲ ಎಂದೆಲ್ಲ ಹೇಳಿದಮೇಲೆ ಒಪ್ಪಿದರು ಎಂದರು.
ನಾವೇ ಬಸವಲಿಂಗಯ್ಯನವರಿಗೆ ಪೋನ್ ಮಾಡಿ ನಮ್ಮ ಪರಿಚಯ ಹೇಳಿಕೊಂಡು 'ನೀವು ಶಿವಸಂಚಾರದ ಕಲಾ"ದರಿಗೆ ನಾಟಕ ನಿರ್ದೇಶಿಸಲು ಒಪ್ಪಿದ್ದಕ್ಕಾಗಿ ಕೃತಜ್ಞತೆ' ಹೇಳುತ್ತ ಸಾಣೇಹಳ್ಳಿಗೆ ಎಂದು ಬರುತ್ತೀರಿ ಎಂದು ಕೇಳಿದೆವು. ಅವರಿಗೆ ಬರುವ ಮನಸ್ಸಿಲ್ಲದ್ದರಿಂದ ನಾಟಕದ ಆಯ್ಕೆಯಲ್ಲಿ ನನಗೆ ಸ್ವಾತಂತ್ರ್ಯ"ರಬೇಕು. 'ದೊರೆ ಈಡಿಪಸ್' ತೆಗೆದುಕೊಳ್ಳುವೆ ಎಂದರು. ಅವರ ಉದ್ದೇಶ ಮಠದ ಪರಂಪರೆಯಲ್ಲಿರುವವರು ಇಂಥ ನಾಟಕವನ್ನು ಆಡಿಸಲು ಮುಂದೆ ಬರುವುದಿಲ್ಲ. ಇದರಿಂದ ಸುಲಭವಾಗಿ ತಪ್ಪಿಸಿಕೊಳ್ಳಬಹುದು ಎನ್ನುವ ಅಭಿಪ್ರಾಯ ಅವರದಾಗಿತ್ತು. 'ನಾವೂ ಆ ನಾಟಕ ಓದಿದ್ದೇವೆ. ಆಗಬಹುದು' ಎಂದು ಅನುಮತಿಸಿದ್ದಾಯ್ತು. ಬೇರೆ ದಾರಿ ಕಾಣದೆ ಬಿಡದ ಕರ್ಮ ಎಂದು ಸಾಣೇಹಳ್ಳಿಗೆ ಬಂದರು. 'ಈಡಿಪಸ್' ನಾಟಕವನ್ನು ಅದ್ಭುತವಾಗಿ ನಿರ್ದೇಶಿಸಿದರು. ಅಲ್ಲಿಂದ ಮುಂದೆ 'ಸಂತ್ಯಾಗ ನಿಂತಾನ ಕಬೀರ', 'ಜಂಗಮದೆಡೆಗೆ', 'ಬೆರಳ್ಗೆ ಕೊರಳ್', 'ಕುಲಂ', 'ಒಡಲಾಳ', 'ಕೈವಾರ ನಾರೇಯಣ' ನಾಟಕಗಳನ್ನು ಶಿವಸಂಚಾರಕ್ಕೆ ನಿರ್ದೇಶಿಸಿ ನಮ್ಮ ಕಲಾಸಂಘದ ಅ"ಭಾಜ್ಯ ಅಂಗವಾದರು. ಅವರ ನಿರ್ದೇಶನದ ಎಲ್ಲ ನಾಟಕಗಳೂ ಸಂಚಾರದ ಗೌರವ ಹೆಚ್ಚಿಸಿದವು ಎಂದರೆ ಉತ್ಪ್ರೇಕೆ ಏನಲ್ಲ. ಅವರು ಸಿಜಿಕೆ ಅವರಂತೆ ಕನಸುಗಾರರು. ಹೊಸದನ್ನು ಶೋಧ ಮಾಡುವ ಗುಣವುಳ್ಳವರು.
ಸಾಣೇಹಳ್ಳಿಯ ಎಲ್ಲ ರಂಗಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾ, ಹೊಸ ಹೊಸ ಆಲೋಚನೆಗಳಿಗೆ ಹೊಳಹು ನೀಡುತ್ತ, ಎಡಪಂಥೀಯ ತತ್ವಗಳನ್ನೂ ಬಿಡದೇ ಶ್ರೀಮಠದ ಪರಂಪರೆಗೆ ಒಗ್ಗಿಕೊಂಡಿದ್ದಾರೆ. ನಮ್ಮಂಥವರು ಮಠಗಳಿಂದ ದೂರ"ದ್ದು ಸಾಧಿಸಿದ್ದೇನು ಎನ್ನುವ ಪ್ರಶ್ನೆಯನ್ನು ತಮಗೆ ತಾವೇ ಹಾಕಿಕೊಳ್ಳುತ್ತಾರೆ. ಅವರು ನಿರ್ದೇಶಿಸಿರುವ ಎಲ್ಲ ನಾಟಕಗಳೂ ಜನಮನವನ್ನು ಸೂರೆಗೊಳ್ಳುವಲ್ಲಿ ಸಫಲವಾಗಿವೆ. ೨೦೦೩ರಲ್ಲಿ ಅವರು ಶಿವಸಂಚಾರಕ್ಕೆ ನಿರ್ದೇಶಿಸಿದ 'ಬೆರಳ್‌ಗೆ ಕೊರಳ್' ನಾಟಕ ಅದೇ ತಾನೇ ರೂಪಗೊಂಡಿದ್ದ 'ಶ್ರೀ ಶಿವಕುಮಾರ ಬಯಲು ರಂಗಮಂದಿರ'ದಲ್ಲಿ ನಡೆಯಬೇಕಿತ್ತು. ಹತ್ತಿಪ್ಪತ್ತು ಸಾ"ರ ಜನ ಸೇರಿದ್ದಾರೆ. ನೋಡಲು ಅವಕಾಶ"ರುವುದು ಐದಾರು ಸಾ"ರ ಜನರಿಗೆ ಮಾತ್ರ! ಬಯಲಿನಲ್ಲಿ ಎರಡು ಮೂರು ದೊಡ್ಡ ಸ್ಕ್ರೀನ್ ಹಾಕಿದರೂ ಎಲ್ಲ ಜನರನ್ನ ತೃಪ್ತಿಗೊಳಿಸಲು ಸಾಧ್ಯವಾಗದ ಸಂದರ್ಭ. ಆಗ ಸಿಜಿಕೆ ಒಂದು ಪ್ರದರ್ಶನ ಮುಗಿಯುತ್ತಲೇ ಅದೇ ನಾಟಕದ ಮತ್ತೊಂದು ಪ್ರದರ್ಶನ ನೀಡುತ್ತೇವೆ. ಪ್ರೇಕ್ಷಕರು ಎರಡು ಗಂಟೆ ತಾಳ್ಮೆಂದ ಬೇರೆಡೆ ನಿಮ್ಮ ಕಾಲವನ್ನು ಕಳೆಯಬೇಕು ಎಂದು ಧ್ವನಿವರ್ಧಕದಲ್ಲಿ ಹೇಳುತ್ತಲೇ ಜನರಿಂದ ಹೋ ಎಂಬ ಸಂತೋಷದ ಉದ್ಘಾರ ಬಂತು. ಕಲಾ"ದರಿಗೆ ಪರಿಶ್ರಮವಾದರೂ ಜನರ ಉತ್ಸಾಹಕ್ಕೆ ತಣ್ಣೀರೆರಚದೆ ಬಸವಲಿಂಗಯ್ಯನವರು ಮತ್ತು ಕಲಾ"ದರು ಮೊದಲ ಪ್ರದರ್ಶನ ಮುಗಿಯುತ್ತಲೇ ತಡಮಾಡದೆ ಮರುಪ್ರದರ್ಶನ ಕೊಟ್ಟರು.
ಬಹುಶಃ ರಂಗಭೂ"ಯ ಇತಿಹಾಸದಲ್ಲಿ ಒಂದೇ ನಾಟಕವನ್ನ ಒಂದೇ ರಂಗಮಂಚದ ಮೇಲೆ ಬಿಡು"ಲ್ಲದೆ ಎರಡನೆಯ ಪ್ರದರ್ಶನ ನೀಡಿದ್ದು, ಹತ್ತಾರು ಸಾ"ರ ಜನ ನೋಡಿದ್ದು ಐತಿಹಾಸಿಕ ದಾಖಲೆ ಎಂದೇ ಹೇಳಬೇಕು. "ಗೆ ಬಸವಲಿಂಗಯ್ಯನವರು ಸದಾ ಜಂಗಮತ್ವ ಮೈಗೂಡಿಸಿಕೊಂಡು ರಂಗಕ್ಷೇತ್ರದಲ್ಲಿ ಹಲವಾರು ಮರೆಯದ ದಾಖಲೆಗಳಿಗೆ ಕಾರಣರಾಗಿದ್ದಾರೆ. ಶಿವಸಂಚಾರ 'ಭಾರತ ಸಂಚಾರ' ಮಾಡಬೇಕು ಎನ್ನುವ ಕನಸನ್ನು ನಮ್ಮಲ್ಲಿ ಬಿತ್ತಿದವರೇ ಅವರು. ತಾವೇ 'ಜಂಗಮದೆಡೆಗೆ' ಎನ್ನುವ ನಮ್ಮ ನಾಟಕವನ್ನು "ಂದಿ ಭಾಷೆಯಲ್ಲಿ ನಿರ್ದೇಶನ ಮಾಡಿದರು. ಭಾರತದ ೨೧ ಪ್ರಮುಖ ನಗರಗಳಲ್ಲಿ ಆ ನಾಟಕಗಳ ಪ್ರದರ್ಶನಕ್ಕೆ ಸಿದ್ಧತೆ ಮಾಡಿದರು. 'ಭಾರತ ಸಂಚಾರ' ಸಹ ರಂಗಭೂ"ಯ ಮತ್ತೊಂದು ದಾಖಲೆ. ಸಿಜಿಕೆ ದೈ"ಕವಾಗಿ ನಮ್ಮನ್ನಗಲಿದನಂತರ ಬಸವಲಿಂಗಯ್ಯನವರು ಶಿವಸಂಚಾರದ ಬಗ್ಗೆ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳುವ ಹುಮ್ಮಸ್ಸಿನಲ್ಲಿದ್ದಾರೆ. ಎಲ್ಲರ ಜೊತೆಗೆ ಪ್ರೀತಿಂದ ಮಾತನಾಡುವ, ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ, ನಿರ್ದೇಶನದಲ್ಲಿ ಸದಾ ಹೊಸತನ್ನು ಹುಡುಕುವ, ಕಲಾ"ದರನ್ನು ಹುರುದುಂಬಿಸುವ ಸಂಘಟಕರ ಜೊತೆ "ಶ್ವಾಸದಿಂದಲೇ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳುವ ಬಸವಲಿಂಗಯ್ಯನವರು ಸಾಣೇಹಳ್ಳಿಗೆ ಬಂದಮೇಲೆ ತಮ್ಮ ವ್ಯಕ್ತಿಗತ ಬದುಕಿನಲ್ಲೂ ಮಹತ್ವದ ಬದಲಾವಣೆ ಕಂಡುಕೊಂಡಿದ್ದಾರೆ.
ಭಾರತದ ಅಗ್ರಗಣ್ಯ ರಂಗನಿರ್ದೇಶಕ ಮತ್ತು ಚಿಂತಕರಲ್ಲಿ ಒಬ್ಬರಾಗಿರುವ ಬಸವಸಲಿಂಗಯ್ಯನವರು ಕೈಗೆತ್ತಿಕೊಳ್ಳುವ ಎಲ್ಲ ನಾಟಕಗಳಲ್ಲೂ ಹೊಸ ಹೊಸ ಸಾಧ್ಯತೆಗಳನ್ನು ಕಂಡುಕೊಳ್ಳುವರು. ಅವರ ಜಾಗೃತ ಮನಸ್ಸು ಸೃಜನಶೀಲತೆಯ ಪ್ರತಿರೂಪ. ಸಿದ್ಧಪಠ್ಯಗಳಿಗೆ ಬದಲಾಗಿ ಸವಾಲೆನಿಸುವ ಕೃತಿಗಳನ್ನೇ ಆಯ್ದು ಕೈಗೆತ್ತಿಕೊಂಡು ಯಶಸ್ವಿಯಾಗುವುದು ಅವರ ಜಾಯಮಾನ. ಇದಕ್ಕೆ ತಾಜಾ ಉದಾಹರಣೆ ಕುವೆಂಪು ಅವರ 'ಮಲೆಗಳಲ್ಲಿ ಮದುಮಗಳು'. ಇದು ರಾಷ್ಟ್ರ ರಂಗಭೂ"ಯಲ್ಲಿ ಸಂಚಲನವುಂಟು ಮಾಡಿದ ಬೆನ್ನಲ್ಲೇ ಸಿಜಿಕೆ ಕನಸಿನ `ಅಲ್ಲಮನ ಬಯಲಾಟ' ನಾಟಕದ ನಿರ್ದೇಶನಕ್ಕೆ ನಿಂತಿರುವುದು ಹಲವರ ಕಾತರಕ್ಕೆ ಕಾರಣವಾಗಿದೆ. ಪ್ರೇಕ್ಷಕ, ನಟ, ನಿರ್ದೇಶಕರ ಸಮಚಿತ್ತ ಬಯಸುವ ಈ ನಾಟಕ ರೂಢಿಗತ ಜಾಡಿನಲ್ಲಿ ಸಾಗದೆ ನ"ನ ಹಾದಿಯೊಂದನ್ನು, ಸಂಕೀರ್ಣತೆಯನ್ನೂ ಸ್ಟೃಸುತ್ತಾ ಸಾಗುತ್ತದೆ. ನಾಟಕ ಕಟ್ಟುವ ಮತ್ತು ರಂಗಕ್ಕಿಳಿಸುವ ತಂತ್ರಗಾರಿಕೆ ಕನ್ನಡದ ಇದುವರೆಗಿನ ನಾಟಕಗಳಿಗಿಂತ ಭಿನ್ನವಾಗಿದೆ. ಇಂಥ ಪ್ರತಿಭಾವಂತ 'ಬಸು' ಅವರಿಗೆ ಅತೀ ಚಿಕ್ಕ ವಯಸ್ಸಿನಲ್ಲೇ ರಂಗಾಯಣದ ನಿರ್ದೇಶಕರ ಸ್ಥಾನದ ಜೊತೆಗೆ 'ಕರ್ನಾಟಕ ರಾಜ್ಯೋತ್ಸವ'ದಂಥ ಪ್ರತ್ಠಿತ ಪ್ರಶಸ್ತಿ ಬಂದಿರುವುದು ಅವರ ಕ್ರಿಯಾಶೀಲತೆಗೆ ಸಾಕ್ಷಿಯಾದೆ. ಅಂಥವರಿಗೆ ನಮ್ಮ ಸಂಘದಿಂದಲೇ ಕೊಡಮಾಡುವ 'ಶ್ರೀ ಶಿವಕುಮಾರ ಪ್ರಶಸ್ತಿ' ಈಗ ಬಂದಿರುವುದು ಎಲ್ಲರಿಗಿಂತ ಹೆಚ್ಚಾಗಿ ನಮಗೆ ತೃಪ್ತಿ ತಂದಿದೆ. ಈ ಪ್ರಶಸ್ತಿ ಅವರಿಗೆ ಇನ್ನಷ್ಟು ಶಕ್ತಿಯನ್ನು ನೀಡಿ ರಂಗಭೂ"ಗೆ ಮಹತ್ವದ ಕಾಣಿಕೆ ನೀಡಲು ಪ್ರೇರಕವಾಗಲೆಂದು ಹಾರೈಸುತ್ತೇವೆ.

ಸಾಣೇಹಳ್ಳಿಯ ಪರಿಚಯ

ಸುಮಾರು 400 ಮನೆಗಳ ಪುಟ್ಟ ಗ್ರಾಮ. ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿಗೆ ಸೇರಿದೆ. ಇಲ್ಲಿ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಶಾಖಾ ಮಠವಿದೆ. ಹೊಸದುರ್ಗದಿಂದ ತರಿಕೆರೆಗೆ ಹೋಗುವ ರಸ್ತೆಯಲ್ಲಿ 16 ಕಿ ಮೀ ಕ್ರಮಿಸಿದರೆ ಬಲಕ್ಕೆ 'ಶರಣರ ಬರವೆಮಗೆ ಪ್ರಾಣ ಜೀವಾಳವಯ್ಯ'ಎಂಬ ಮಹಾದ್ವಾರ ಸರ್ವರನ್ನೂ ಸ್ವಾಗತಿಸುವುದು.

ನಮ್ಮ ವಿಳಾಸ

ಶ್ರೀ ಶಿವಕುಮಾರ ಕಲಾಸಂಘ (ರಿ)
ಸಾಣೇಹಳ್ಳಿ-577 515
ಹೊಸದುರ್ಗ-ತಾ, ಚಿತ್ರದುರ್ಗ-ಜಿ
ಕರ್ನಾಟಕ-ರಾಜ್ಯ, ಭಾರತ-ದೇಶ
ಫೋನ್ ನಂ : 918199243772
ಮೊಬೈಲ್ ನಂ : +91 9449649850
+91 9448393081

Designed by EXONICS