ಶೈಕ್ಷಣಿಕ:

ಶ್ರೀ ಗುರುಪಾದೇಶ್ವರ ಪ್ರೌಢಶಾಲೆ: ಸಾಣೇಹಳ್ಳಿ ಶ್ರೀಮಠದ ಗುರುಪರಂಪರೆಯಲ್ಲಿ ಶ್ರೀ ಗುರುಪಾದಸ್ವಾಮಿಗಳೂ ಒಬ್ಬರು. ಅವರ ಹೆಸರಿನಲ್ಲಿ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಶ್ರಯದಡಿಯಲ್ಲಿ 1964ರಲ್ಲಿ ಪ್ರೌಢಶಾಲೆಯನ್ನು ತೆರೆದಿದ್ದು ಅದೀಗ ಉತ್ತಮ ಶಿಕ್ಷಣ ನೀಡುತ್ತಿದೆ.8, 9, 10ನೆಯ ತರಗತಿಯಲ್ಲಿ ತಲಾ ಎರಡು ಸೆಕ್ಷನ್‌ಗಳಿದ್ದು ಗ್ರಾಮೀಣ ಪ್ರದೇಶದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲೂ ಶಿಕ್ಷಣ ನೀಡುವ ವ್ಯವಸ್ಥೆ ಇದೆ. 1996-97 ರಲ್ಲಿ ಮಂಜುನಾಥ್ ಎನ್ನುವ ಬಡ ವಿದ್ಯಾರ್ಥಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಹತ್ತನೆಯ ರ‍ಯಾಂಕ್ ಗಳಿಸಿ ಶಾಲೆಗೆ ಗೌರವ ತಂದದ್ದು ಮರೆಯದ ಸಂಗತಿ. ಅಂತೆಯೇ ಇಲ್ಲಿ ಓದಿದ ಹೆಚ್ಚಿನ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ದೇಶ ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಮಕ್ಕಳು ಓದುವುದರಲ್ಲಿ ಹಿಂದಿಲ್ಲ ಎನ್ನುವುದಕ್ಕೆ ಈ ಶಾಲೆ ಸಾಕ್ಷಿಯಾಗಿದೆ. ಅಧ್ಯಾಪಕರು ವಿಶೇಷ ತರಗತಿಗಳನ್ನು ತೆಗೆದುಕೊಂಡು ವಿದ್ಯಾರ್ಥಿಗಳ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಉತ್ಸಾಹದಿಂದ ಪರಿಶ್ರಮಿಸುತ್ತಿರುವರು.
ಶ್ರೀ ಶಿವಕುಮಾರ ಸ್ವಾಮಿಜಿ ಹಿರಿಯ ಪ್ರಾಥಮಿಕ ಶಾಲೆ: ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎನ್ನುವ ಗಾದೆಯ ಮಾತಿನಂತೆ ಚಿಕ್ಕಮಕ್ಕಳಿದ್ದಾಗಲೇ ಉತ್ತಮ ಶಿಕ್ಷಣ ದೊರೆಯಬೇಕು ಎನ್ನುವ ಸದಾಶಯದಿಂದ ಶ್ರೀ ಶಿವಕುಮಾರ ವಿದ್ಯಾವರ್ಧಕ ಸಂಘದಡಿಯಲ್ಲಿ 1990ರಲ್ಲಿ ಈ ಶಾಲೆಯನ್ನು ಪ್ರಾರಂಭಿಸಲಾಗಿದೆ. ಒಂದರಿಂದ ಏಳನೆಯ ತರಗತಿಯವರೆಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮಗಳೆರಡರಲ್ಲೂ ಗುಣಾತ್ಮಕ ಶಿಕ್ಷಣ ನೀಡಲಾಗುತ್ತಿದೆ. ಸುಸಜ್ಜಿತ ಕಟ್ಟಡ, ಗ್ರಂಥಾಲಯ, ಆಟದ ಮೈದಾನ, ಕಂಪ್ಯೂಟರ್ ತರಬೇತಿ, ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗ ಪ್ರತ್ಯೇಕ ವಸತಿ ಸೌಲಭ್ಯ ಇದ್ದು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಆಶಾಕಿರಣವಾಗಿದೆ.
ಶಾಲಾ ನಿಯಮಾವಳಿಗಳು
1. ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿ ಮತ್ತು ಯುಕೆಜಿಯಿಂದ 7 ನೆಯ ತರಗತಿಯವರೆಗೆ ಪ್ರವೇಶವಿದ್ದು ಸಹಶಿಕ್ಷಣ ವ್ಯವಸ್ಥೆ ಇರುತ್ತದೆ.
2. 6 ಮತ್ತು 7 ನೆಯ ತರಗತಿಗೆ ಮಾತ್ರ ಇಂಗ್ಲಿಷ್ ಮಾದ್ಯಮವಿರುತ್ತದೆ.
3. ಪ್ರೌಢಶಾಲೆಯಲ್ಲಿ 8, 9 ಮತ್ತು 10 ನೆಯ ತರಗತಿಯ ಕನ್ನಡ ಮತ್ತು ಆಂಗ್ಲ ಮಾಧ್ಯಮಕ್ಕೆ ಪ್ರವೇಶವಿದ್ದು ಸಹಶಿಕ್ಷಣ ವ್ಯವಸ್ಥೆ
   ಇರುತ್ತದೆ.
4. ಮೇ 15 ರಿಂದ 30 ರವರೆಗೆ ಮಾತ್ರ ಪ್ರವೇಶ ನೀಡಲಾಗುವುದು. ಮೊದಲು ಬಂದವರಿಗೆ ಆದ್ಯತೆ.
5. ಜೂನ್ 2 ರಿಂದ ಎಲ್ಲ ತರಗತಿಗಳ ಪಾಠಗಳು ಆರಂಭವಾಗುವವು.
6. ರಾಜ್ಯ ಸರಕಾರ ನಿಗದಿಪಡಿಸಿದ ಪರಿಷ್ಕೃತ ಹೊಸ ಪಠ್ಯಪುಸ್ತಕಗಳನ್ನು ಬೇಗ ಕೊಂಡುಕೊಳ್ಳುವುದು.
7. ನಿಗದಿಪಡಿಸಿರುವ ಸಮವಸ್ತ್ರಗಳನ್ನು ಸಕಾಲಕ್ಕೆ ಧರಿಸಿಕೊಂಡು ಬರಬೇಕು.
8. ಪ್ರವೇಶ ಪಡೆದ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಶೈಕ್ಷಣಿಕ ಪ್ರವಾಸದಲ್ಲಿ
    ಕಡ್ಡಾಯವಾಗಿ ಭಾಗವಹಿಸಬೇಕು.
9. ಪ್ರತಿ ತಿಂಗಳ ಅಂತಿಮ ಭಾನುವಾರ ಹೊರತು ಪಡಿಸಿ ಶಾಲಾ ಅವಧಿಯಲ್ಲಿ ಪೋಷಕರು ವಿದ್ಯಾರ್ಥಿಗಳನ್ನು ಭೇಟಿಮಾಡಲು ಅಥವಾ
    ದೂರವಾಣಿಯಲ್ಲಿ ಮಾತನಾಡಲು ಅವಕಾಶವಿರುವುದಿಲ್ಲ.
10. ಕಾಲಕಾಲಕ್ಕೆ ನಡೆಯುವ ಪರೀಕ್ಷೆಗಳ ಪ್ರಗತಿಯನ್ನು ಪೋಷಕರಿಗೆ ಪತ್ರದ ಮೂಲಕ ತಿಳಿಸಲಾಗುವುದು.
11. ಶಿಕ್ಷಕರು ನೀಡುವ ಸಲಹೆ/ಸೂಚನೆ/ಮಾರ್ಗದರ್ಶಗಳನ್ನು ವಿದ್ಯಾರ್ಥಿಗಳು ಪಾಲಿಸುತ್ತಿದ್ದಾರೆಯೇ ಇಲ್ಲವೇ ಎಂದು ಆಗಾಗ
     ಪೋಷಕರು ಪರೀಕ್ಷಿಸಿ ಸಂಬಂಧಿಸಿದ ಶಿಕ್ಷಕರ ಜೊತೆ ಚರ್ಚಿಸಬಹುದು.
12.ವಿದ್ಯಾರ್ಥಿಗಳ ಫೀ/ದಂಡ ಶುಲ್ಕ ಮತ್ತಿತರೆ ಹಣಕಾಸಿನ ವಿಚಾರಗಳನ್ನು ಸಂಬಂಧಿಸಿದ ಅಧ್ಯಾಪಕರ ಜೊತೆಗೆ ಪೋಷಕರೇ
     ವ್ಯವಹರಿಸತಕ್ಕದ್ದು.
13. ನಿಗದಿತ ಫೀ ಪಾವತಿ ಮಾಡಿ ದಾಖಲಾದ ಮೇಲೆ ಯಾವುದೇ ಕಾರಣದಿಂದಲೂ ಪಾವತಿಸಿದ ಫೀಯನ್ನು
     ಹಿಂದಿರುಗಿಸಲಾಗುವುದಿಲ್ಲ.
14. ಹೇಳದೇ ಕೇಳದೆ ಶಾಲೆ ತಪ್ಪಿಸಿಕೊಂಡು ಹೋಗುವ ವಿದ್ಯಾರ್ಥಿಗಳ ಬಗ್ಗೆ ಪೋಷಕರಿಗೆ ಮಾಹಿತಿಯನ್ನು ತಿಳಿಸಬಹುದೇ
     ಹೊರತು ಹೆಚ್ಚಿನ ಜವಾಬ್ದಾರಿ ವಹಿಸಲು ಸಾಧ್ಯವಾಗುವುದಿಲ್ಲ.
15. ಶಾಲೆಯ ನೀತಿ-ನಿಯಮಗಳಿಗೆ ವಿರುದ್ಧವಾಗಿ ವರ್ತಿಸುವ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಹಾಕಲಾಗುವುದು.
16. ಪಾಠಪ್ರವಚನ, ಇಲ್ಲಿಯ ವ್ಯವಸ್ಥೆ ಅಥವಾ ಶಿಕ್ಷಕರ ಬಗ್ಗೆ ಗುರುತರವಾದ ದೂರಗಳಿದ್ದಲ್ಲಿ ಮುಖ್ಯಸ್ಥರನ್ನು ಖುದ್ದಾಗಿ ಅಥವಾ
     ದೂರವಾಣಿಯಲ್ಲಿ ಸಂಪರ್ಕಿಸಿ ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.
17. ಸರಕಾರದಿಂದ ಆದೇಶಿಸಲ್ಪಡುವ ಹೊಸ ನಿಯಮಾವಳಿಗಳನ್ನು ಆಯಾ ಕಾಲಕ್ಕೆ ಜಾರಿಗೆ ತರಲಾಗುವುದು.

ಪ್ರತಿಭಾ ಪುರಸ್ಕಾರ :
1. ಪ್ರತಿ ತರಗತಿಯಲ್ಲೂ ಹೆಚ್ಚಿನ ಅಂಕ ಪಡೆಯುವ ಮೊದಲ ಮೂರು ವಿದ್ಯಾರ್ಥಿಗಳಿಗೆ ಶ್ರೀಮಠದಿಂದ ಬಹುಮಾನ.
2. 10 ನೆಯ ತರಗತಿಯಲ್ಲಿ 500 ಕ್ಕಿಂತ ಮೇಲ್ಪಟ್ಟು ಅಂಕಗಳನ್ನು ಪಡೆದಲ್ಲಿ ಅಂಥ ವಿದ್ಯಾರ್ಥಿಗಳಿಗೆ ಅವರು ಗಳಿಸಿದಷ್ಟು ಅಂಕಗಳ
    ಮೊತ್ತದ ನಗದು ಬಹುಮಾನ. (ಪ್ರಾಯೋಜಕರು: ಎ ಸಿ ಚಂದ್ರಣ್ಣ - ಅಜ್ಜಂಪುರ)
3. ಪ್ರಗತಿ ಗ್ರಾಮೀಣ ಬ್ಯಾಂಕ್‌ನವರು ನೀಡುವ ಬಹುಮಾನ.
4. ಬೇರೆ ಬೇರೆ ದಾನಿಗಳು ನೀಡುವ ಬಹುಮಾನ.

ವಿಶೇಷ ಸೌಲತ್ತುಗಳು
1. ಆಗಾಗ ಪೂಜ್ಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿಗಳವರ ಮಾರ್ಗದರ್ಶನ.
2. ನುರಿತ/ಅನುಭವಿ/ಸಂಪನ್ಮೂಲ ಶಿಕ್ಪಕರಿಂದ ಪಾಠ.
3. ವಚನ ಸಂಗೀತ/ಕಂಪ್ಯೂಟರ್/ರಂಗಕಲೆ/ಚಿತ್ರಕಲೆ ಕಲಿಕೆಗೆ ವಿಶೇಷ ತರಗತಿಗಳು.
4. ರೂಪಕಗಳು/ನಾಟಕಗಳಲ್ಲಿ ಭಾಗವಹಿಸುವ ವಿಫುಲ ಅವಕಾಶ.
5. ಭಾಷಣ ಕಲೆ ಕಲಿಸಲು ಪ್ರತಿ ೧೫ ದಿನಗಳಿಗೊಮ್ಮೆ 'ದಂದಣ-ದತ್ತಣ' ಗೋಷ್ಠಿ.
6. ಸುಸಜ್ಜಿತ ಬಯಲು ರಂಗಮಂದಿರ.
7. ರಾಜ್ಯ/ರಾಷ್ಟ್ರ ಮಟ್ಟದ ನಾಟಕ ನೋಡುವ ಅವಕಾಶ.
8. ರಾಷ್ಟ್ರೀಯ/ಅಂತರರಾಷ್ಟ್ರೀಯ ಮಟ್ಟದ ಚಿಂತನಶೀಲರ ಜೊತೆ ಭೇಟಿ/ಸಂವಾದ.
9. ಯೋಗ/ಧ್ಯಾನ-ಪ್ರಾರ್ಥನೆ/ಚಿಂತನೆ/ಮನನಕ್ಕೆ ವಿಶೇಷ ಅವಕಾಶ.
10. ವಿಶಾಲ ಆಟದ ಮೈದಾನ.
11 ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ ವ್ಯವಸ್ಥೆ.
12. ಗ್ರಂಥಾಲಯದ ವ್ಯವಸ್ಥೆ.
13. ಪ್ರತಿಭಾನುವಾರ ದೂರದರ್ಶನದ ವೀಕ್ಷಣೆಗೆ ಅವಕಾಶ.

ಶ್ರೀ ಶಿವಕುಮಾರ ಸ್ವಾಮಿಜಿ ಡಿ ಎಡ್ ಕಾಲೇಜು:
ಪ್ರಾಥಮಿಕ ಶಾಲಾ ಶಿಕ್ಷಕರ ಜವಾಬ್ದಾರಿ ಅತ್ಯಂತ ಗುರುತರವಾದುದು. ಅವರಿಗೆ ಸೂಕ್ತ ತರಬೇತಿ ದೊರೆತರೆ ಅವರಿಂದ ನಾಡಿಗೆ ಒಳಿತಾಗುವುದು ಎನ್ನುವ ನಂಬಿಕೆ ಪೂಜ್ಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರದು. ಅದಕ್ಕಾಗಿ 2004ರಲ್ಲಿ ಡಿ ಎಡ್ ಕಾಲೇಜನ್ನು ಪ್ರಾರಂಭಿಸಲಾಗಿದೆ.ಎರಡು ವರ್ಷದ ಈ ತರಬೇತಿಯಲ್ಲಿ ಆರಂಭದಲ್ಲಿ 50 ಜನ ಪ್ರಶಿಕ್ಷಣಾರ್ಥಿಗಳು ತರಬೇತಿ ಪಡೆಯುತ್ತಿದ್ದು ಈಗ ಮತ್ತೆ 50 ಜನ ಪ್ರಶಿಕ್ಷಣಾರ್ಥಿಗಳಿಗೆ ಸರ್ಕಾರ ಅನುಮತಿ ನೀಡಿದೆ. ಇದಕ್ಕೆ ಕಾರಣ ಸುಸಜ್ಜಿತ ಕಟ್ಟಡ, ನುರಿತ ಉಪನ್ಯಾಸಕರ ಬೋಧನೆ, ಉತ್ತಮ ಗ್ರಂಥಾಲಯ, ಉನ್ನತ ಶ್ರೇಣಿಯ ಫಲಿತಾಂಶ ಮುಂತಾದವು.ಮೊದಲೆರಡು ಬ್ಯಾಚ್‌ಗಳಲ್ಲಿ ಪಾಸಾದ ಎಲ್ಲ ಪ್ರಶಿಕ್ಷಣಾರ್ಥಿಗಳಿಗೂ ನೌಕರಿ ದೊರಕಿರುವುದು ನಮ್ಮ ಕಾಲೇಜಿನ ಶಿಕ್ಷಣದ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ.

(www.srishivkumaradedcollege.org)


< >

   ಧಾರ್ಮಿಕ

   ಸಾಮಾಜಿಕ

   ಸಾಂಸ್ಕೃತಿಕ

   ವಿದ್ಯಾರ್ಥಿ ನಿಲಯ

ವಿದ್ಯಾರ್ಥಿ ನಿಲಯಗಳಲ್ಲಿ ದೊರೆಯುವ ಸೌಲಭ್ಯಗಳು :

1. ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ
    ವಸತಿಯ ವ್ಯವಸ್ಥೆ ಇದೆ.
2. ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ
    ನಿಲಯಪಾಲಕರು ಇರುವರು
3. ನಿರಂತರ ಬೆಳಕಿಗಾಗಿ ಸೌರವಿದ್ಯುತ್‌ನ ವ್ಯವಸ್ಥೆ ಇದೆ.
4. ಸಾಮೂಹಿಕ ಸಹಪಂಕ್ತಿ ಊಟದ ವ್ಯವಸ್ಥೆ ಇದೆ.
5. ಪ್ರತಿದಿನ ಮದ್ಯಾಹ್ನ ಉಪಹಾರದ ವ್ಯವಸ್ಥೆ ಇದೆ.
6. ಪ್ರತಿ ಹದಿನೈದು ದಿನಕ್ಕೊಮ್ಮೆ ಮತ್ತು ಹಬ್ಬ/ವಿಶೇಷ
   ದಿನಗಳಂದು ಸಿಹಿ ಊಟದ ವ್ಯವಸ್ಥೆ ಇದೆ.
7. ಬೆಳಗ್ಗೆ ಮತ್ತು ಸಂಜೆ ವಿಶೇಷ ಪ್ರಾರ್ಥನೆ/ಚಿಂತನೆಯ
    ವ್ಯವಸ್ಥೆ ಇದೆ.
8. ಶನಿವಾರ ಮತ್ತು ಭಾನುವಾರದಂದು ಟಿ ವಿ
   ನೋಡುವ ವ್ಯವಸ್ಥೆ ಇದೆ.
9. ವಿದ್ಯಾರ್ಥಿಗಳ ಆದ್ಯಯನಕ್ಕೆ ಪೂರಕವಾಗುವಂತೆ
   ವಸತಿ ಶಿಕ್ಷಕರ ನಿಯೋಜನೆ ಇದೆ.


ಸಾಣೇಹಳ್ಳಿಯ ಪರಿಚಯ

ಸುಮಾರು 400 ಮನೆಗಳ ಪುಟ್ಟ ಗ್ರಾಮ. ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿಗೆ ಸೇರಿದೆ. ಇಲ್ಲಿ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಶಾಖಾ ಮಠವಿದೆ. ಹೊಸದುರ್ಗದಿಂದ ತರಿಕೆರೆಗೆ ಹೋಗುವ ರಸ್ತೆಯಲ್ಲಿ 16 ಕಿ ಮೀ ಕ್ರಮಿಸಿದರೆ ಬಲಕ್ಕೆ 'ಶರಣರ ಬರವೆಮಗೆ ಪ್ರಾಣ ಜೀವಾಳವಯ್ಯ'ಎಂಬ ಮಹಾದ್ವಾರ ಸರ್ವರನ್ನೂ ಸ್ವಾಗತಿಸುವುದು.

ನಮ್ಮ ವಿಳಾಸ

ಶ್ರೀ ಶಿವಕುಮಾರ ಕಲಾಸಂಘ (ರಿ)
ಸಾಣೇಹಳ್ಳಿ-577 515
ಹೊಸದುರ್ಗ-ತಾ, ಚಿತ್ರದುರ್ಗ-ಜಿ
ಕರ್ನಾಟಕ-ರಾಜ್ಯ, ಭಾರತ-ದೇಶ
ಫೋನ್ ನಂ : 918199243772
ಮೊಬೈಲ್ ನಂ : +91 9449649850
+91 9448393081

Designed by EXONICS