ಧಾರ್ಮಿಕ:

ಆಧುನಿಕ ಶಿಕ್ಷಣ ಅಧರ್ಮಿಗಳನ್ನು ಸೃಷ್ಟಿಸುತ್ತಿದೆ ಎನ್ನುವ ಮಾತು ಸಮಾಜದಲ್ಲಿ ಕೇಳಿಬರುತ್ತಿದೆ. ಇದಕ್ಕೆ ಕಾರಣ ನೈತಿಕ, ಧಾರ್ಮಿಕ ನೆಲೆಗಟ್ಟಿಲ್ಲದ ಶಿಕ್ಷಣ ಪಡೆಯುತ್ತಿರುವುದು. ಈ ಹಿನ್ನೆಲೆಯಲ್ಲಿ ಸಾಣೇಹಳ್ಳಿಯ ಎಲ್ಲ ವಿದ್ಯಾರ್ಥಿಗಳು ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಸಾಮೂಹಿಕ ಪ್ರಾರ್ಥನೆ, ಯೋಗಾಸನ ಮಾಡುವರು. ಭಕ್ತರಿಗೆ ಆಗಾಗ ಇಷ್ಟಲಿಂಗ ದೀಕ್ಷೆ ಕರುಣಿಸಲಾಗುವುದು.ಗಣಪತಿ ಹಬ್ಬವನ್ನು ಶಿವಾನುಭವ ಶಿಬಿರವನ್ನಾಗಿ ಮಾರ್ಪಡಿಸಿದ್ದು ಮಹತ್ವದ ಸಂಗತಿ. ಬಸವ ಜಯಂತಿಯನ್ನೂ ಒಳಗೊಂಡಂತೆ ಹಲವು ಶಿವಶರಣರ ಜಯಂತಿಗಳನ್ನು ಆಚರಿಸುವ ಮೂಲಕ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಶರಣರ ವಿಚಾರಗಳನ್ನು ತಿಳಿಸಲಾಗುವುದು. ವಿದ್ಯಾರ್ಥಿಗಳಿಗೆ ಸಿರಿಗೆರೆ 'ವಚನ ಮಂಟಪ'ದವರು ನಡೆಸುವ ವಿಶೇಷ ವಚನ ಪ್ರವೇಶ, ವಚನ ಪರಿಚಯ, ವಚನ ವಿಶಾರದ, ವಚನ ಪ್ರವೀಣ ಎನ್ನುವ ಪರೀಕ್ಷೆಗಳನ್ನು ಪ್ರತಿವರ್ಷ ನಡೆಸಲಾಗುವುದು. ಅದಕ್ಕಾಗಿ ವಚನ ಪಠ್ಯವಿದ್ದು ಅಧ್ಯಾಪಕರು ವಿದ್ಯಾರ್ಥಿಗಳಿಗೆ ಪಾಠ ಮಾಡುವರು. ಸಾಮೂಹಿಕ ಮದುವೆಗಳಲ್ಲೂ ಧಾರ್ಮಿಕ ವಿಚಾರಗಳನ್ನು ಹೇಳುವ ಮೂಲಕ ಜನರಲ್ಲಿ ಧಾರ್ಮಿಕ ಶ್ರದ್ಧೆ ಮೂಡಿಸಲಾಗುವುದು. ಆಗಾಗ ಶಿವಾನುಭವ ಪ್ರವಾಸದ ಮೂಲಕವೂ ಧರ್ಮತತ್ವದ ಪ್ರಚಾರ ಮಾಡಲಾಗುವುದು.


< >

   ಸಾಮಾಜಿಕ

   ಶೈಕ್ಷಣಿಕ

   ಸಾಂಸ್ಕೃತಿಕ

ಸಾಣೇಹಳ್ಳಿಯ ಪರಿಚಯ

ಸುಮಾರು 400 ಮನೆಗಳ ಪುಟ್ಟ ಗ್ರಾಮ. ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿಗೆ ಸೇರಿದೆ. ಇಲ್ಲಿ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಶಾಖಾ ಮಠವಿದೆ. ಹೊಸದುರ್ಗದಿಂದ ತರಿಕೆರೆಗೆ ಹೋಗುವ ರಸ್ತೆಯಲ್ಲಿ 16 ಕಿ ಮೀ ಕ್ರಮಿಸಿದರೆ ಬಲಕ್ಕೆ 'ಶರಣರ ಬರವೆಮಗೆ ಪ್ರಾಣ ಜೀವಾಳವಯ್ಯ'ಎಂಬ ಮಹಾದ್ವಾರ ಸರ್ವರನ್ನೂ ಸ್ವಾಗತಿಸುವುದು.

ನಮ್ಮ ವಿಳಾಸ

ಶ್ರೀ ಶಿವಕುಮಾರ ಕಲಾಸಂಘ (ರಿ)
ಸಾಣೇಹಳ್ಳಿ-577 515
ಹೊಸದುರ್ಗ-ತಾ, ಚಿತ್ರದುರ್ಗ-ಜಿ
ಕರ್ನಾಟಕ-ರಾಜ್ಯ, ಭಾರತ-ದೇಶ
ಫೋನ್ ನಂ : 918199243772
ಮೊಬೈಲ್ ನಂ : +91 9449649850
+91 9448393081

Designed by EXONICS