ಚಟುವಟಿಕೆಗಳು :


ಧಾರ್ಮಿಕ:

ಆಧುನಿಕ ಶಿಕ್ಷಣ ಅಧರ್ಮಿಗಳನ್ನು ಸೃಷ್ಟಿಸುತ್ತಿದೆ ಎನ್ನುವ ಮಾತು ಸಮಾಜದಲ್ಲಿ ಕೇಳಿಬರುತ್ತಿದೆ. ಇದಕ್ಕೆ ಕಾರಣ ನೈತಿಕ,ಧಾರ್ಮಿಕ ನೆಲೆಗಟ್ಟಿಲ್ಲದ ಶಿಕ್ಷಣ ಪಡೆಯುತ್ತಿರುವುದು.ಈ ಹಿನ್ನೆಲೆಯಲ್ಲಿ ಸಾಣೇಹಳ್ಳಿಯ ಎಲ್ಲ ವಿದ್ಯಾರ್ಥಿಗಳು ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಸಾಮೂಹಿಕ ಪ್ರಾರ್ಥನೆ , ಯೋಗಾಸನ ಮಾಡುವರು. ಭಕ್ತರಿಗೆ ಆಗಾಗ ಇಷ್ಟಲಿಂಗ ದೀಕ್ಷೆ ಕರುಣಿಸಲಾಗುವುದು. ಶಿವಗಣಾರಾಧನೆ, ಗೃಹಪ್ರವೇಶ, ಸಾಮೂಹಿಕ ಮದುವೆ ಮತ್ತಿತ್ತರ ಸಮಾರಂಭಗಳಲ್ಲಿ ಧಾರ್ಮಿಕ ವಿಚಾರಗಳನ್ನು ಹೇಳುವ ಮೂಲಕ ಜನರಲ್ಲಿ ಧಾರ್ಮಿಕ ಶ್ರದ್ಧೆ ಮೂಡಿಸಲಾಗುವುದು.
>>

 

 

ಸಾಮಾಜಿಕ :

ಜನರು ಸಣ್ಣ ಸಣ್ಣ ಕಾರಣಗಳಿಗೆ ಜಗಳ ಮಾಡುವರು. ಅದು ವಿರಸಕ್ಕೆ ತಿರುಗಿ ಪೊಲೀಸ್ ಸ್ಟೇಷನ್, ನ್ಯಾಯಾಲಯಗಳ ಕಟ್ಟೆ ಹತ್ತಿ ಹಣ, ಸಮಯ ಎರಡನ್ನೂ ಕಳೆದುಕೊಂಡು ಸಾಕಪ್ಪಾ ಇದರ ಸಹವಾಸ ಎನ್ನುವ ವಾತಾವರಣ ಮೂಡಿದೆ. ಇದನ್ನು ತಪ್ಪಿಸುವ ಹಿನ್ನೆಲೆಯಲ್ಲಿ ಮಠದಲ್ಲಿ 'ನ್ಯಾಯ ಪಂಚಾಯತಿ' ನಡೆಯುವುದು. ಪೂಜ್ಯ ಸ್ವಾಮಿಜಿಯವರು ತಮ್ಮಲ್ಲಿಗೆ ಬಂದ ದೂರಿನನ್ವಯ ಎರಡೂ ಗುಂಪಿನವರನ್ನು ಕರೆಸಿ ಅವರ ಅಹವಾಲುಗಳನ್ನು ಕೇಳಿ ಸೂಕ್ತ ನಿರ್ಣಯ ನೀಡುವರು.
>>

     
ಶೈಕ್ಷಣಿಕ:

ಸಾಣೇಹಳ್ಳಿ ಶ್ರೀಮಠದ ಗುರುಪರಂಪರೆಯಲ್ಲಿ ಶ್ರೀ ಗುರುಪಾದ ಸ್ವಾಮಿಗಳೂ ಒಬ್ಬರು. ಅವರ ಹೆಸರಿನಲ್ಲಿ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಶ್ರಯದಡಿಯಲ್ಲಿ 1964ರಲ್ಲಿ ಪ್ರೌಢಶಾಲೆಯನ್ನು ತೆರೆದಿದ್ದು ಅದೀಗ ಉತ್ತಮ ಶಿಕ್ಷಣ ನೀಡುತ್ತಿದೆ.8, 9, 10ನೆಯ ತರಗತಿಯಲ್ಲಿ ತಲಾ ಎರಡು ಸೆಕ್ಷನ್‌ಗಳಿದ್ದು ಗ್ರಾಮೀಣ ಪ್ರದೇಶದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಈಗ ಆಂಗ್ಲ ಮಾಧ್ಯಮದಲ್ಲೂ ಶಿಕ್ಷಣ ನೀಡಲಾಗುತ್ತದೆ.
>>

 
ಸಾಂಸ್ಕೃತಿಕ :

ಶಿಕ್ಷಣಕ್ಕೆ ಸಾಂಸ್ಕೃತಿಕ ನೆಲೆಗಟ್ಟಿರಬೇಕು ಎನ್ನುವುದನ್ನು ಮನಗಂಡ ಪೂಜ್ಯ ಸ್ವಾಮಿಜಿಯವರು ಇಲ್ಲಿ ಸಂಗೀತಶಾಲೆ ತೆರೆದು ಆಸಕ್ತ ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣವನ್ನು ನೀಡುತ್ತಿದ್ದಾರೆ.ಕೆಲವು ವಿದ್ಯಾರ್ಥಿಗಳು ಸುಶ್ರಾವ್ಯವಾಗಿ ವಚನಗಳನ್ನು ಹಾಡುವುದನ್ನು ಕೇಳುವುದೇ ಸಂತೋಷ. ಬೇಸಿಗೆಯ ರಜಾ ಕಾಲವನ್ನು ಸದ್ವಿನಿಯೋಗಗೊಳಿಸುವ ಆಶಯದಿಂದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಬೇಸಿಗೆ ಶಿಬಿರ ನಡೆಸಲಾಗುವುದು. ವಚನ ರೂಪಕಗಳನ್ನು ಕಲಿಸಲಾಗುವುದು.
>>


ಸಾಣೇಹಳ್ಳಿಯಲ್ಲಿರುವ ವಿವಿಧ ಸೇವಾಸಂಸ್ಥೆಗಳು ಸಾಣೇಹಳ್ಳಿಯಲ್ಲಿರುವ ವಿವಿಧ ಸೇವಾಸಂಸ್ಥೆಗಳು ಸಾಣೇಹಳ್ಳಿಯಲ್ಲಿರುವ ವಿವಿಧ ಸೇವಾಸಂಸ್ಥೆಗಳು ಸಾಣೇಹಳ್ಳಿಯಲ್ಲಿರುವ ವಿವಿಧ ಸೇವಾಸಂಸ್ಥೆಗಳು ಸಾಣೇಹಳ್ಳಿಯಲ್ಲಿರುವ ವಿವಿಧ ಸೇವಾಸಂಸ್ಥೆಗಳು ಸಾಣೇಹಳ್ಳಿಯಲ್ಲಿರುವ ವಿವಿಧ ಸೇವಾಸಂಸ್ಥೆಗಳು

ಕಾರ್ಯದರ್ಶಿ,
ಶ್ರೀ ಶಿವಕುಮಾರ ಕಲಾಸಂಘ,
ಸಾಣೇಹಳ್ಳಿ-೫೭೭ ೫೧೫,
ಹೊಸದುರ್ಗ-ತಾ, ಚಿತ್ರದುರ್ಗ-ಜಿ,
ಫೋನ್ ನಂ : 08199-243772
ರಂಗಶಾಲೆ ನಂ: 9448393081
ಮೊಬೈಲ್ ನಂ : 9449649850
ಇ-ಮೇಲ್ : info@shivasanchara.org
ವೆಬ್‌ಸೈಟ್: www.shivasanchara.org

ಈ ವಿಳಾಸಕ್ಕೆ ಹಣ ಕಳಿಸಬಹುದು.

ಸಾಣೇಹಳ್ಳಿಯ ಪರಿಚಯ

ಸುಮಾರು 400 ಮನೆಗಳ ಪುಟ್ಟ ಗ್ರಾಮ. ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿಗೆ ಸೇರಿದೆ. ಇಲ್ಲಿ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಶಾಖಾ ಮಠವಿದೆ. ಹೊಸದುರ್ಗದಿಂದ ತರಿಕೆರೆಗೆ ಹೋಗುವ ರಸ್ತೆಯಲ್ಲಿ 16 ಕಿ ಮೀ ಕ್ರಮಿಸಿದರೆ ಬಲಕ್ಕೆ 'ಶರಣರ ಬರವೆಮಗೆ ಪ್ರಾಣ ಜೀವಾಳವಯ್ಯ'ಎಂಬ ಮಹಾದ್ವಾರ ಸರ್ವರನ್ನೂ ಸ್ವಾಗತಿಸುವುದು.

ನಮ್ಮ ವಿಳಾಸ

ಶ್ರೀ ಶಿವಕುಮಾರ ಕಲಾಸಂಘ (ರಿ)
ಸಾಣೇಹಳ್ಳಿ-577 515
ಹೊಸದುರ್ಗ-ತಾ, ಚಿತ್ರದುರ್ಗ-ಜಿ
ಕರ್ನಾಟಕ-ರಾಜ್ಯ, ಭಾರತ-ದೇಶ
ಫೋನ್ ನಂ : 918199243772
ಮೊಬೈಲ್ ನಂ : +91 9449649850
+91 9448393081

Designed by EXONICS