ಸಾಂಸ್ಕೃತಿಕ:
ಶಿಕ್ಷಣಕ್ಕೆ ಸಾಂಸ್ಕೃತಿಕ ನೆಲೆಗಟ್ಟಿರಬೇಕು ಎನ್ನುವುದನ್ನು ಮನಗಂಡ ಪೂಜ್ಯ ಸ್ವಾಮಿಜಿಯವರು ಇಲ್ಲಿ ಸಂಗೀತಶಾಲೆ ತೆರೆದು ಆಸಕ್ತ ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣವನ್ನು ನೀಡುತ್ತಿದ್ದಾರೆ.ಕೆಲವು ವಿದ್ಯಾರ್ಥಿಗಳು ಸುಶ್ರಾವ್ಯವಾಗಿ ವಚನಗಳನ್ನು
ಹಾಡುವುದನ್ನು ಕೇಳುವುದೇ ಸಂತೋಷ.
ಸ್ವಾಮಿಜಿಯವರು ಪ್ರತಿನಿತ್ಯ ಗ್ರಾಮೀಣ ಮತ್ತು ನಗರ ಪ್ರದೇಶದ ಹತ್ತು ಹಲವು ಕಾರ್ಯಕ್ರಮಗಳಿಗೆ ದಯಮಾಡಿಸಿ ಜನರಿಗೆ ಶರಣರ ಜೀವನ ಸಿದ್ಧಾಂತಗಳ ಪರಿಚಯವನ್ನು ಮಾಡಿಕೊಡುವರು. ಮದುವೆ, ಗೃಹಪ್ರವೇಶ, ಶಿವಗಣಾರಾಧನೆ, ರಥೋತ್ಸವ, ಜಾತ್ರೆ
ಯಾವುದೇ ಕಾರ್ಯಕ್ರಮಗಳಿದ್ದರೂ ಅವುಗಳಿಗೆ ಸರ್ವಶರಣ ಸಮ್ಮೇಳನಗಳೆಂದು ಕರೆದು ಆ ಮೂಲಕ ಜನರನ್ನು ಜಾಗೃತಗೊಳಿಸುವ ಕಾರ್ಯ ನಿರಂತರವಾಗಿ ಸ್ವಾಮಿಜಿಯವರಿಂದ ನಡೆಯುವುದು. ಅವರು ನಿತ್ಯ ಪ್ರವಾಸ ಮಾಡಿ ಜನರ ಧಾರ್ಮಿಕ ಅಜ್ಞಾನ
ನಿವಾರಿಸಿ ವೈಚಾರಿಕತೆ ಬೆಳೆಸುವ ಕಾಯಕ, ದಾಸೋಹ, ಪೂಜೆಯ ಮಹತ್ವ ತಿಳಿಸುವ ಕೆಲಸ ಮಾಡುತ್ತಿದ್ದಾರೆ.
ದಂದಣ ದತ್ತಣ ಗೋಷ್ಠಿ:
ಆಳಿಗೊಂಡಿಹರೆಂದು ಅಂಜಲದೇಕೆ?
ನಾಸ್ತಿಕವಾಡಿಹರೆಂದು ನಾಚಲದೇಕೆ?
ಆರಾದಡಾಗಲಿ ಶ್ರೀಮಹಾದೇವಂಗೆ ಶರಣೆನ್ನಿ,
ಏನೂ ಅರಿಯೆನೆಂದು ಮೌನಗೊಂಡಿರಬೇಡ.
ಕೂಡಲಸಂಗಮದೇವರ ಮುಂದೆದಂದಣ ದತ್ತಣಯೆನ್ನಿ.
ಬಸವಣ್ಣನವರ ಈ ವಚನವನ್ನು ಆಧರಿಸಿ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಸಿರಿಗೆರೆಯಲ್ಲಿ 'ದಂದಣ ದತ್ತಣ' ಗೋಷ್ಠಿಯನ್ನು 40 ವರ್ಷಗಳ ಹಿಂದೆಯೇ ಪ್ರಾರಂಭಿಸಿದ್ದರು. ಮಕ್ಕಳಲ್ಲಿ ಧೈರ್ಯ ತುಂಬಿ ಮಾತನಾಡುವ ಕಲೆಯನ್ನು ಕಲಿಸುವುದೇ ಈ ಗೋಷ್ಠಿಯ
ಉದ್ದೇಶ. ಇಂಥ ಗೋಷ್ಠಿಯನ್ನು ಪ್ರತಿ ಹದಿನೈದು ದಿನಕ್ಕೊಮ್ಮೆ ಸಾಣೇಹಳ್ಳಿಯಲ್ಲಿ ನಡೆಸಲಾಗುವುದು. ಪ್ರಾಥಮಿಕ ಶಾಲೆಯಿಂದ ಡಿ ಇಡಿ ವರೆಗಿನ ಎಲ್ಲ ವಿದ್ಯಾರ್ಥಿಗಳು, ಊರಿನ ನಾಗರಿಕರು ಇದರಲ್ಲಿ ಭಾಗವಹಿಸುವರು.ನಿಗದಿತ ವಿಷಯದ ಮೇಲೆ ಮೂರು ಜನ
ವಿದ್ಯಾರ್ಥಿಗಳು ಮಾತನಾಡುವರು.ಹೊರಗಿನಿಂದ ಬಂದ ಒಬ್ಬ ಅತಿಥಿಗಳು ವಿಷಯಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಬೆಳಕು ಚೆಲ್ಲುವರು. ಕೊನೆಯಲ್ಲಿ ಪ್ರಶ್ನೋತ್ತರ ನಡೆಯುವುದು.ಆಯಾ ವಿಷಯಕ್ಕೆ ಸಂಬಂಧಿಸಿದಂತೆ ಚಿಕ್ಕ ಚಿಕ್ಕ ರೂಪಕಗಳನ್ನೂ ವಿದ್ಯಾರ್ಥಿಗಳು
ಮಾಡುವರು.ಈ ಗೋಷ್ಠಿಯ ಕಾರಣದಿಂದಾಗಿ ಸಾಣೇಹಳ್ಳಿಯಲ್ಲಿ ಓದುತ್ತಿರುವ ಮಕ್ಕಳಿಗೆ ಸಭಾಕಂಪನ ಎಂದರೆ ಏನೆಂದು ತಿಳಿಯದು.
ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರ:
ಬೇಸಿಗೆಯ ರಜಾ ಕಾಲವನ್ನು ಸದ್ವಿನಿಯೋಗಗೊಳಿಸುವ ಆಶಯದಿಂದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಬೇಸಿಗೆ ಶಿಬಿರ ನಡೆಸಲಾಗುವುದು. ಕ್ರೀಡೆ, ವಿಜ್ಞಾನ, ಸಾಹಿತ್ಯ, ರಂಗಕಲೆ ಮುಂತಾದ ಚಟುವಟಿಕೆಗಳ ಮೂಲಕ ಮಕ್ಕಳ
ಸಮಗ್ರ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾಗುವ ತರಬೇತಿ ನೀಡಲಾಗುವುದು.ಶಿಬಿರದ ಅವಧಿಯಲ್ಲಿ ಮಕ್ಕಳು ಒಂದು ನಾಟಕವನ್ನು ಕಲಿತು ಪ್ರದರ್ಶಿಸುವರು.ವ್ಯಕ್ತಿತ್ವ ವಿಕಾಸದ ಜೊತೆಗೆ ಉತ್ತಮ ಅಭ್ಯಾಸ ಮತ್ತು ಹವ್ಯಾಸಗಳ ವೃದ್ಧಿಗೆ ಶಿಬಿರ
ಮಾರ್ಗದರ್ಶಿಯಾಗುವುದು.
ಧಾರ್ಮಿಕ
ಸಾಮಾಜಿಕ
ಶೈಕ್ಷಣಿಕ
ವಿದ್ಯಾರ್ಥಿ ನಿಲಯ
ವಿದ್ಯಾರ್ಥಿ ನಿಲಯಗಳಲ್ಲಿ ದೊರೆಯುವ ಸೌಲಭ್ಯಗಳು :
1. ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ
ವಸತಿಯ ವ್ಯವಸ್ಥೆ ಇದೆ.
2. ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ
ನಿಲಯಪಾಲಕರು ಇರುವರು
3. ನಿರಂತರ ಬೆಳಕಿಗಾಗಿ ಸೌರವಿದ್ಯುತ್‌ನ ವ್ಯವಸ್ಥೆ ಇದೆ.
4. ಸಾಮೂಹಿಕ ಸಹಪಂಕ್ತಿ ಊಟದ ವ್ಯವಸ್ಥೆ ಇದೆ.
5. ಪ್ರತಿದಿನ ಮದ್ಯಾಹ್ನ ಉಪಹಾರದ ವ್ಯವಸ್ಥೆ ಇದೆ.
6. ಪ್ರತಿ ಹದಿನೈದು ದಿನಕ್ಕೊಮ್ಮೆ ಮತ್ತು ಹಬ್ಬ/ವಿಶೇಷ
ದಿನಗಳಂದು ಸಿಹಿ ಊಟದ ವ್ಯವಸ್ಥೆ ಇದೆ.
7. ಬೆಳಗ್ಗೆ ಮತ್ತು ಸಂಜೆ ವಿಶೇಷ ಪ್ರಾರ್ಥನೆ/ಚಿಂತನೆಯ
ವ್ಯವಸ್ಥೆ ಇದೆ.
8. ಶನಿವಾರ ಮತ್ತು ಭಾನುವಾರದಂದು ಟಿ ವಿ
ನೋಡುವ ವ್ಯವಸ್ಥೆ ಇದೆ.
9. ವಿದ್ಯಾರ್ಥಿಗಳ ಆದ್ಯಯನಕ್ಕೆ ಪೂರಕವಾಗುವಂತೆ
ವಸತಿ ಶಿಕ್ಷಕರ ನಿಯೋಜನೆ ಇದೆ.