ಶ್ರೀ ಶಿವಕುಮಾರ ಪ್ರಶಸ್ತಿ :
ಮಠವೆಂದಾಕ್ಷಣ ಬಹುತೇಕ ಜನರ ಮನಸ್ಸಿನಲ್ಲಿ ಧಾರ್ಮಿಕ ಆಚರಣೆ, ಹೆಚ್ಚೆಂದರೆ ಶಿಕ್ಷಣ ಸಂಸ್ಥೆ, ಅನ್ನ ದಾಸೋಹ ನಡೆಸುವ ತಾಣ ಎನ್ನುವ ಭಾವನೆ ಬರಬಹುದು. ಆದರೆ ಇವುಗಳ ಜೊತೆಗೆ ರಂಗಭೂಮಿಯನ್ನೇ ಕಾಯಕ ಕ್ಷೇತ್ರವಾಗಿಸಿಕೊಂಡ ಮಠದ ಉದಾಹರಣೆ
ಸಿಗುವುದು ವಿರಳ, ವಿರಳವೇನು ಬಂತು! ಬಹುಷ:ಸಾಣೇಹಳ್ಳಿಯನ್ನು ಹೊರತುಪಡಿಸಿದರೆ ಭಾರತದಲ್ಲೆಲ್ಲೂ ಇಂತಹ ಮತ್ತೊಂದು ಉದಾಹರಣೆ ಸಿಗಲಾರದು.
ಶ್ರೀ ಶಿವಕುಮಾರ ಸ್ವಾಮಿಗಳವರು ಸುಮಾರು 1950 ರಲ್ಲಿ ಸಿರಿಗೆರೆಯಲ್ಲಿ ’ತರಳಬಾಳು ಕಲಾಸಂಘ’ ಸ್ಥಾಪಿಸಿದರು. ತಾವೇ ನಾಟಕಗಳನ್ನು ರಚಿಸಿ,ನಿರ್ದೇಶಿಸಿ ಭಾರತದ ಉದ್ದಗಲಕ್ಕೂ ಅವುಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿದ್ದರು.ಸರ್ಕಾರದ ಅನುದಾನ, ಪ್ರಶಸ್ಥಿ,
ಪುರಸ್ಕಾರಗಳ ಹಂಗಿಲ್ಲದೆ ಕಲಾಸೇವೆ ಮಾಡಿದ ಮಹಾನ್ ಕಲಾಪೋಷಕರು ಪೂಜ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳು.ಅಂಥ ದಿವ್ಯ ಚೇತನದ ಸ್ಮರಣಾರ್ಥ ಅವರ ಹೆಸರಿನಲ್ಲೇ ಪ್ರತಿಷ್ಠಿತ ’ಶ್ರೀ ಶಿವಕುಮಾರ’ ಪ್ರಶಸ್ತಿಯನ್ನು ರಂಗಭೂಮಿಯಲ್ಲಿ ಅಪರೂಪದ ಸಾಧನೆ
ಮಾಡಿದ ಪ್ರತಿಭಾನ್ವಿತರಿಗೆ ಪ್ರತಿವರ್ಷ ನೀಡಲಾಗುವುದು.
ಪ್ರಶಸ್ತಿಯ ಸ್ವರೂಪ, ಆಯ್ಕೆಯ ಮಾನದಂಡಗಳು:
ಪ್ರಶಸ್ತಿಯು 25000/- ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕ ಹೊಂದಿರುತ್ತದೆ.
ರಂಗಭೂಮಿಯ ಜೀವಮಾನದ ಸಾಧನೆ ಪರಿಗಣಿಸಲಾಗುವುದು. (ನಾಟಕ ರಚನೆ, ನಿರ್ದೇಶನ, ಅಭಿನಯ, ಸಂಘಟನೆ
ಇತ್ಯಾದಿ )
ಗ್ರಾಮೀಣ ಭಾಗದಲ್ಲಿ ದುಡಿದವರಿಗೆ ಆದ್ಯತೆ.
ಹವ್ಯಾಸಿ-ವೃತ್ತಿ, ಸ್ತ್ರೀ-ಪುರುಷ ಎಂಬ ಭೇದ-ಭಾವ ಇರಕೂಡದು.
ರಂಗಭೂಮಿಗೆ ಮೀಸಲಾಗಿರುವ ’ಗುಬ್ಬಿ ವೀರಣ್ಣ’ ಅದಕ್ಕೆ ತತ್ಸಮಾನವಾದ ರಾಜ್ಯ/ಕೇಂದ್ರದ ಪ್ರಶಸ್ತಿ
ಪಡೆದವರನ್ನು
ಪರಿಗಣಿಸಬಾರದು. (ಪ್ರಶಸ್ತಿ ಪಡೆದವರೇ ಮತ್ತೆ ಮತ್ತೆ ಪಡೆಯುವಂತಾಗದೆ ನಮ್ಮ ಪ್ರಶಸ್ತಿ ಇದಕ್ಕಿಂತ
ಉನ್ನತ ಮಟ್ಟದ ಪ್ರಶಸ್ತಿ
ಪಡೆಯಲು ಉತ್ತೇಜನ ನೀಡಬೇಕು ಎನ್ನುವ ಆಶಯ)
ಪ್ರಶಸ್ತಿ ಪಡೆಯುವವರ ವಯಸ್ಸು ಕನಿಷ್ಠ 50 ವರ್ಷ ದಾಟಿರಬೇಕು. ಇಲ್ಲವೇ ರಂಗಭೂಮಿಯಲ್ಲಿ 25 ವರ್ಷ ಸೇವೆ
ಸಲ್ಲಿಸಿರಬೇಕು.
ನವೆಂಬರ್ ನಲ್ಲಿ ಸಾಣೇಹಳ್ಳಿಯಲ್ಲಿ ನಡೆಯುವ ನಾಟಕೋತ್ಸವದ ಸಂದರ್ಭದಲ್ಲಿ ಪ್ರಶಸ್ತಿ ವಿತರಿಸಲಾಗುವುದು.
ಪುರಸ್ಕೃತರು
ಖುದ್ದಾಗಿ ಆಗಮಿಸಿ ಪ್ರಶಸ್ತಿ ಸ್ವೀಕರಿಸಬೇಕು.
ಈ ಪ್ರಶಸ್ತಿಯ ನಗದು ಹಣ 25 ಸಾವಿರ ರೂಪಾಯಿಗಳನ್ನು ಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ|| ಶಿವಮೂರ್ತಿ ಶಿವಾಚಾರ್ಯ
ಮಹಾಸ್ವಾಮಿಗಳವರು ಪ್ರತಿವರ್ಷ ಕರುಣಿಸುವರು. ಪೂಜ್ಯರಿಗೆ ನಮ್ಮ ಸಂಘದ ಭಕ್ತಿಯ ನಮನಗಳು.
ಪ್ರಶಸ್ತಿ ಪುರಸ್ಕೃತರು
1. ಪ್ರಸನ್ನ - 2004
2. ಸಿಜಿಕೆ - 2005
3. ಪಿ.ಜಿ. ಗಂಗಾಧರ ಸ್ವಾಮಿ - 2006
4. ಅಶೋಕ ಬಾದರದಿನ್ನಿ - 2007
5. ಮಾಲತಿಶ್ರೀ ಮೈಸೂರು - 2008
6. ಸಿ.ಬಸವಲಿಂಗಯ್ಯ-2010
7. ಜಯಶ್ರೀ -2011