ವಿದ್ಯಾರ್ಥಿ ನಿಲಯ :
ಪ್ರಾಥಮಿಕ ಶಾಲೆಯಿಂದ ಹಿಡಿದು ಹೈಸ್ಕೂಲ್, ಡಿ ಎಡ್ ಓದುವ ವಿದ್ಯಾರ್ಥಿಗಳಿಗಾಗಿಯೇ ಪ್ರತ್ಯೇಕ ಊಟ-ವಸತಿಯ ಸೌಲಭ್ಯ ಕಲ್ಪಿಸಲಾಗಿದೆ. 500 ವಿದ್ಯಾರ್ಥಿಗಳು ಈ ಸೌಲಭ್ಯ ಪಡೆಯುತ್ತಿದ್ದಾರೆ. ಇನ್ನೂ ಹೆಚ್ಚಿನ ವಸತಿ ವ್ಯವಸ್ಥೆ ಮಾಡಲು
ಯೋಜನೆ ಹಾಕಿಕೊಂಡಿದ್ದು ಅದು ಈ ವರ್ಷ ನೆರವೇರುವ ಸಾಧ್ಯತೆಗಳಿವೆ.
ಸ್ವಾಮಿಜಿಯವರು ಪ್ರತಿನಿತ್ಯ ಗ್ರಾಮೀಣ ಮತ್ತು ನಗರ ಪ್ರದೇಶದ ಹತ್ತು ಹಲವು ಕಾರ್ಯಕ್ರಮಗಳಿಗೆ ದಯಮಾಡಿಸಿ ಜನರಿಗೆ ಶರಣರ ಜೀವನ ಸಿದ್ಧಾಂತಗಳ ಪರಿಚಯವನ್ನು ಮಾಡಿಕೊಡುವರು. ಮದುವೆ, ಗೃಹಪ್ರವೇಶ, ಶಿವಗಣಾರಾಧನೆ, ರಥೋತ್ಸವ, ಜಾತ್ರೆ
ಯಾವುದೇ ಕಾರ್ಯಕ್ರಮಗಳಿದ್ದರೂ ಅವುಗಳಿಗೆ ಸರ್ವಶರಣ ಸಮ್ಮೇಳನಗಳೆಂದು ಕರೆದು ಆ ಮೂಲಕ ಜನರನ್ನು ಜಾಗೃತಗೊಳಿಸುವ ಕಾರ್ಯ ನಿರಂತರವಾಗಿ ಸ್ವಾಮಿಜಿಯವರಿಂದ ನಡೆಯುವುದು. ಅವರು ನಿತ್ಯ ಪ್ರವಾಸ ಮಾಡಿ ಜನರ ಧಾರ್ಮಿಕ ಅಜ್ಞಾನ
ನಿವಾರಿಸಿ ವೈಚಾರಿಕತೆ ಬೆಳೆಸುವ ಕಾಯಕ, ದಾಸೋಹ, ಪೂಜೆಯ ಮಹತ್ವ ತಿಳಿಸುವ ಕೆಲಸ ಮಾಡುತ್ತಿದ್ದಾರೆ.
ಪ್ರಸಾದ ನಿಲಯದ ನಿಯಮಾವಳಿಗಳು
ಲಗೇಜನ್ನು ಸಾಧ್ಯವಿದ್ದಷ್ಟು ಕಡಿಮೆ ಇಟ್ಟುಕೊಳ್ಳುವುದು.
ಕಡ್ಡಾಯವಾಗಿ ಚಾಪೆ, ಹೊದಿಕೆ, ತಟ್ಟೆ, ಲೋಟ, ಬಕೀಟು ಇಟ್ಟುಕೊಳ್ಳುವುದು.
ಊಟ ಮತ್ತು ಪ್ರಾರ್ಥನೆಯ ಸಮಯದಲ್ಲಿ ಕೆಂಪು ವಸ್ತ್ರ, ಬಿಳಿ ಪಂಜೆ (ವಿದ್ಯಾರ್ಥಿನಿಯರಿಗೆ ಬಿಳಿ ಪಾಯಿಜಾಮ), ಟೀ
ಷರಟ್ ಕಡ್ಡಾಯವಾಗಿ
ಧರಿಸಬೇಕು.
ಮೇಲ್ಕಂಡ ಧಿರಿಸುಗಳನ್ನು ವಿದ್ಯಾರ್ಥಿನಿಲಯದಲ್ಲಿ ನಿಗದಿತ ಮೊತ್ತ ನೀಡಿ ಪಡೆದುಕೊಳ್ಳಬೇಕು.
ಸಾಧ್ಯವಿದ್ದಷ್ಟು ವೈಯಕ್ತಿಕ ಸ್ವಚ್ಛತೆಯ (ಬಟ್ಟೆ, ಪುಸ್ತಕ, ಟ್ರಂಕು, ಶರೀರ) ಕಡೆಗೆ ಗಮನ ಹರಿಸುವುದು. ರಜಾದಿನಗಳನ್ನು ಈ
ಕಾರಣಗಳಿಗಾಗಿ
ಬಳಸುವುದು.
ವಿದ್ಯಾರ್ಥಿಗಳ ತೀವ್ರತರವಾದ ಅನಾರೋಗ್ಯದ ಬಗೆಗೆ ಪೋಷಕರೇ ಜವಾಬ್ದಾರರು.
ವಿದ್ಯಾರ್ಥಿನಿಲಯದಲ್ಲಿ ಅಧಿಕೃತ ರಜೆ ಘೋಷಿಸದೆ ವಿದ್ಯಾರ್ಥಿಗಳು ಊರಿಗೆ ಹೋಗುವಂತಿಲ್ಲ.
ಶಾಲೆಗೆ ರಜೆ ಇದ್ದಾಗಲೂ ವಿದ್ಯಾರ್ಥಿಗಳು ವಿದ್ಯಾರ್ಥಿ ನಿಲಯದಲ್ಲಿದ್ದು ಅಧ್ಯಯನ ಮಾಡಬೇಕು.
ಪ್ರತಿದಿನದ ಪ್ರಾರ್ಥನೆ, ಊಟ, ಅಧ್ಯಯನದ ಅವಧಿಯಲ್ಲಿ ಕಡ್ಡಾಯವಾಗಿ ಭಾಗವಹಿಸತಕ್ಕದ್ದು. ತಪ್ಪಿದ್ದಲ್ಲಿ 50/- ರೂ ದಂಡ
ವಿಧಿಸಲಾಗುವುದು.
ಅನುಮತಿ ಪಡೆಯದೆ ಊರಿಗೆ ಹೋದ ವಿದ್ಯಾರ್ಥಿಗಳಿಗೆ ಪ್ರತಿದಿನಕ್ಕೆ 60/- ರೂ ದಂಡ ವಿಧಿಸಲಾಗುವುದು.
ವಿದ್ಯಾರ್ಥಿಗಳು ಅನುಮತಿ ಪಡೆಯದೆ ತಪ್ಪಿಸಿಕೊಂಡು ಹೋದರೆ ಸಂಸ್ಥೆ ಹೊಣೆಯಲ್ಲ.
ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ತಮ್ಮ ಬಳಿ ಹಣ, ಒಡವೆ, ಮೊಬೈಲ್‌ಗಳನ್ನು ಇಟ್ಟುಕೊಳ್ಳುವಂತಿಲ್ಲ. ಅವು
ಕಳೆದುಹೋದುದರ ಬಗ್ಗೆ
ದೂರನ್ನು ಆಲಿಸಲಾಗುವುದಿಲ್ಲ.
ಹಣವನ್ನು ಸಂಬಂಧಿಸಿದ ತರಗತಿ ಶಿಕ್ಷಕರ ಹತ್ತಿರ ಕೊಡತಕ್ಕದ್ದು ಮತ್ತು ಪ್ರತಿದಿನ ಶಾಲಾ ಅವಧಿಯಲ್ಲಿ ಸಂಜೆ ೪ ರಿಂದ ೫
ಗಂಟೆಯೊಳಗಾಗಿ
ಹಣಕಾಸಿನ ವ್ಯವಹಾರ ಬಗೆಹರಿಸಿಕೊಳ್ಳತಕ್ಕದ್ದು.
ಸಂಜೆ 5 ರಿಂದ 6 ರ ಹೊರತಾಗಿ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಶಾಲಾ ಆವರಣದಿಂದ ಆಚೆ
ಹೋಗುವಂತಿಲ್ಲ.
ಶಾಲೆ ಮತ್ತು ವಿದ್ಯಾರ್ಥಿ ನಿಲಯಗಳಲ್ಲಿ ಅಧಿಕೃತ ರಜೆ ಘೋಷಿಸಿದಾಗ ವಿದ್ಯಾರ್ಥಿಗಳನ್ನು ಊರಿಗೆ ಕರೆದುಕೊಂಡು
ಹೋಗುವ ಮತ್ತು ಹಿಂತಿರುಗಿ
ಕುಳುಹಿಸುವ ಹೊಣೆಗಾರಿಕೆ ಪೋಷಕರದ್ದೇ ಆಗಿರುತ್ತದೆ.
ನಿಯಮಾವಳಿಗಳನ್ನು ಮೀರಿ ಅಶಿಸ್ತಿನಿಂದ ವರ್ತಿಸಿದ ವಿದ್ಯಾರ್ಥಿಗಳನ್ನು ವಿದ್ಯಾರ್ಥಿನಿಲಯದಿಂದ ಹೊರಹಾಕಲಾಗುವುದು.
ವಿಶೇಷ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ನಿಲಯಪಾಲರಿಂದ ಪೂರ್ವಾನುಮತಿ ಪಡೆಯತಕ್ಕದ್ದು.
ಅನಾನುಕೂಲಗಳಾದಲ್ಲಿ ವಿದ್ಯಾರ್ಥಿಗಳು/ಪೋಷಕರು ಸಂಬಂಧಿಸಿದ ಶಿಕ್ಷಕರು, ಮುಖ್ಯೋಪಾದ್ಯಾಯರು, ವಾರ್ಡನ್
ಅಥವಾ
ಸ್ಥಳೀಯ ಸಮಿತಿಯ ಪದಾಧಿಕಾರಿಗಳನ್ನು ಖುದ್ದಾಗಿ ಅಥವಾ ದೂರವಾಣಿಯ ಮೂಲಕ ಸಂಪರ್ಕಿಸಬಹುದು.
ಪ್ರಸಾದ ನಿಲಯದ ದಿನಚರಿ
ಪ್ರತಿದಿನ ಬೆಳಗ್ಗೆ 5 ಗಂಟೆಗೆ ಎದ್ದು ನಿತ್ಯಕರ್ಮ ಪೂರೈಸುವುದು.
5-30 ರಿಂದ 6-30 ರವರೆಗೆ ಅಧ್ಯಯನ.
6-30 ರಿಂದ 7 ರವರೆಗೆ ಸಾಮೂಹಿಕ ಪ್ರಾರ್ಥನೆ.
7 ರಿಂದ 7-15 ರವರೆಗೆ ಸಾಮೂಹಿಕ ಸ್ವಚ್ಛತೆ.
7-15 ರಿಂದ 8-45 ರವರೆಗೆ ಅಧ್ಯಯನ/ವಿಶೇಷ ತರಗತಿಗಳು.
8-45 ರಿಂದ 9-30 ರವರೆಗೆ ಊಟ.
9-30 ರಿಂದ 9-50 ರವರೆಗೆ ಶಾಲೆಗೆ ಹೋಗಲು ಸಿದ್ಧತೆ.
9-50 ರಿಂದ 1 ಗಂಟೆವರೆಗೆ ಶಾಲೆ.
1 ರಿಂದ 1-45 ರವರೆಗೆ ಉಪಹಾರ/ಬಿಸಿಯೂಟ.
1-45 ರಿಂದ 4 ರವರೆಗೆ ಶಾಲೆ.
4 ರಿಂದ 5 ರವರೆಗೆ ಗುಂಪು ಅಧ್ಯಯನ/ಘಟಕದ ಶಿಕ್ಷಕರಿಂದ ಹಾಜರಾತಿ
5 ರಿಂದ 6-15 ರವರೆಗೆ ಆಟ, ವಿಶ್ರಾಂತಿ
6-15 ರಿಂದ 6-45ರವರೆಗೆ ಸಾಮೂಹಿಕ ಪ್ರಾರ್ಥನೆ.
6-45ರಿಂದ 7-30 ರವರೆಗೆ ಊಟ.
7-30 ರಿಂದ 10 ರವರೆಗೆ ಅಧ್ಯಯನ.
10 ರಿಂದ ನಿದ್ರೆ.
ಧಾರ್ಮಿಕ
ಸಾಮಾಜಿಕ
ಶೈಕ್ಷಣಿಕ
ಸಾಂಸ್ಕೃತಿಕ
ವಿದ್ಯಾರ್ಥಿ ನಿಲಯಗಳಲ್ಲಿ ದೊರೆಯುವ ಸೌಲಭ್ಯಗಳು :
1. ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿಯ
ವ್ಯವಸ್ಥೆ ಇದೆ.
2. ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ
ನಿಲಯಪಾಲಕರು ಇರುವರು
3. ನಿರಂತರ ಬೆಳಕಿಗಾಗಿ ಸೌರವಿದ್ಯುತ್‌ನ ವ್ಯವಸ್ಥೆ ಇದೆ.
4. ಸಾಮೂಹಿಕ ಸಹಪಂಕ್ತಿ ಊಟದ ವ್ಯವಸ್ಥೆ ಇದೆ.
5. ಪ್ರತಿದಿನ ಮದ್ಯಾಹ್ನ ಉಪಹಾರದ ವ್ಯವಸ್ಥೆ ಇದೆ.
6. ಪ್ರತಿ ಹದಿನೈದು ದಿನಕ್ಕೊಮ್ಮೆ ಮತ್ತು ಹಬ್ಬ/ವಿಶೇಷ
ದಿನಗಳಂದು ಸಿಹಿ ಊಟದ ವ್ಯವಸ್ಥೆ ಇದೆ.
7. ಬೆಳಗ್ಗೆ ಮತ್ತು ಸಂಜೆ ವಿಶೇಷ ಪ್ರಾರ್ಥನೆ/ಚಿಂತನೆಯ
ವ್ಯವಸ್ಥೆ ಇದೆ.
8. ಶನಿವಾರ ಮತ್ತು ಭಾನುವಾರದಂದು ಟಿ ವಿ ನೋಡುವ
ವ್ಯವಸ್ಥೆ ಇದೆ.
9. ವಿದ್ಯಾರ್ಥಿಗಳ ಆದ್ಯಯನಕ್ಕೆ ಪೂರಕವಾಗುವಂತೆ ವಸತಿ
ಶಿಕ್ಷಕರ ನಿಯೋಜನೆ ಇದೆ.